ಪ್ರಣಾಳಿಕೆ ಮಾಡಿಕೊಳ್ಳುವದು
ಸುಲಭಕರವಾದ ವಿಬಿಎಸ್
ನಿಮ್ಮ ಕೈಯಲ್ಲಿರುವ ವಿಬಿಎಸ್ ತುಂಬಾ ಸುಲಭಕರವಾದದ್ದು, ಪ್ರಣಾಳಿಕೆಯನ್ನು ಹಾಕುವದಕ್ಕೂ ತುಂಬಾ ಸುಲಭ ಮತ್ತು ಮಾಡುವದಕ್ಕೂ ಕೂಡ ಇದು ತುಂಬಾ ಸುಲಭಕರವಾದದ್ದು. ಒಂದು ತಾರೀಖನ್ನು ನಿರ್ಣಯಿಸಿಕೊಳ್ಳರಿ, ಕೆಲವು ಸಹಾಯಕರನ್ನು ಆಯ್ಕೆ ಮಾಡಿಕೊಳ್ಳರಿ, ನಿಮ್ಮ ಸ್ಥಳದ ಸುತ್ತಮುತ್ತ ಆಹ್ವಾನಿಸುವ ಪೋಸ್ಟರ್ಗಳನ್ನು ಅಂಟಿಸಿರಿ. ನೀವೀಗ ನಿಮ್ಮ ವಿಬಿಎಸ್ ಕಾರ್ಯಕ್ರಮವನ್ನು ನಡೆಸಿಕೊಳ್ಳಿರಿ!
ಕೆಲಸ ಮಾಡುವ ದೊಡ್ಡ ಗುಂಪಿನೊಂದಿಗೆ, ಎಲ್ಲರು ಇದರಲ್ಲಿ ಸೇರಿ, ಪಾಲ್ಗೊಂಡು ಕೆಲಸ ಮಾಡುವಾಗ ಇನ್ನೂ ವಿನೋದಾತ್ಮಕವಾಗಿ ಈ ವಿಬಿಎಸ್ ಇರುತ್ತದೆ, ಆದ್ದರಿಂದ, ಹೆಚ್ಚಿನ ಮಕ್ಕಳು ಸೇರಿ ಕೆಲಸ ಮಾಡುವಂಥೆ ಈ ಕೆಲಸವನ್ನು ಕೆಲವು ವಿವಿಧ ಭಾಗಗಳಾಗಿ ವಿಂಗಡಿಸಲಾಗಿದೆ.
ನಿಮ್ಮ ವಿಬಿಎಸ್ ಕಾರ್ಯಕ್ರಮದ ಕೆಲಸವನ್ನು ವಿಭಾಗಿಸಿಕೊಳ್ಳುವದಕ್ಕೆ ಇಲ್ಲಿ ನಿಮಗೆ ಕೆಲವು ಸಲಹೆಗಳುಂಟು :
ವಿಬಿಎಸ್ ನಿರ್ದೇಶಕರು ಒಬ್ಬರು
ಹಾಡುಗಳನ್ನು ನಡೆಸುವವರು ಒಬ್ಬರು
ಮುಖ್ಯ ಪಾಠಕ್ಕಾಗಿ ಪ್ರಸಂಗೀಕರು ಒಬ್ಬರು
ನಾಟಕಕ್ಕಾಗಿ ಇಬ್ಬರು ನಟರು (ಕೇಪ್ಟೆನ್ ಮತ್ತು ರೋಬೋ)
ತರಗತಿಯ ನಿರ್ವಾಹಕರು ಒಬ್ಬರು (ವಿದ್ಯಾರ್ಥಿ ಪುಸ್ತಕಗಳು ಮತ್ತು ಪಾಠಗಳನ್ನು ತಿರುಗಿ ಓದುಕೊಳ್ಳುವದಕ್ಕೆ)
ಹಸ್ತ ಕಲಾ ವಸ್ತುಗಳ ನಿರ್ವಾಹಕರು ಒಬ್ಬರು
ಅಲ್ಪಾಹಾರವನ್ನು ನಿರ್ವಹಿಸುವರು ಒಬ್ಬರು
ಆಟಗಳ ನಿರ್ವಹಿಸುವರು ಒಬ್ಬರು
ಪ್ರತೀ ಚಿಕ್ಕ ಗುಂಪಿಗಾಗಿ 6 ರಿಂದ 10 ನಾಯಕರು ಅಗತ್ಯವಾಗಿರುತ್ತಾರೆ, ಅದು ನಿಮ್ಮ ವಿಬಿಎಸ್ನಲ್ಲಿರುವ ಮಕ್ಕಳ ಸಂಖ್ಯೆಯ ಮೇಲೆ ಆಧಾರಪಟ್ಟಿರುತ್ತದೆ.
ನಾಟಕಗಳು / ಬಣ್ಣ ಹಚ್ಚುವದು
ಪ್ರತೀ ದಿನ ಬಾಹ್ಯಾಕಾಶದ ನೌಕೆಯಾಗಿರುವ “ಗೆಲಾಕ್ಸಿ ಎಕ್ಸಪ್ರೆಸ್”ನೊಳಗೆ ಮಕ್ಕಳೆಲ್ಲರನ್ನು ಸೇರಿಸಿಕೊಂಡು, ತನ್ನ ಸಹಾಯಕನಾಗಿರುವ ರೋಬೋದೊಂದಿಗೆ ಕೆಪ್ಟೆನ್ ಸವಾರಿಗಾಗಿ ಕರೆದುಕೊಂಡು ಹೋಗುವನು.
ನಿಮ್ಮ ಕೇಪ್ಟೆನ್ ತುಂಬಾ ಕೋಪದಿಂದ ಇರುತ್ತಾನೆ. ಯಾಕಂದರೆ ಆ ನೌಕೆಯ ವಿಷಯದಲ್ಲಿ ಆತನಿಗೆ ಹೆಚ್ಚಾದ ಬಾಧ್ಯತೆ ಇರುತ್ತದೆ. ಅದೇ ರೀತಿಯಾಗಿ ಆ ವಾರವೆಲ್ಲಾ ಆತ್ಮೀಯಕವಾದ ಪಾಠಗಳನ್ನು ಮಕ್ಕಳೆಲ್ಲರೂ ಕಲಿಯುವ ಸಾಮಥರ್ಯ್‌ವನ್ನು ಪಡೆಯುವರು. ಅಲ್ಲಿರುವ ಎಲ್ಲಾ ಪ್ರೇಕ್ಷಕರಿಗೆ ತನ್ನ ಸಹಾಯಕನಾದ ರೋಬೋನನ್ನು ಪರಿಚಯ ಮಾಡುವನು: ಒಂದು ತರ ವಿಕಾರವಾಗಿದ್ದು, ಕೆಲವುಸಲ ಸರಿಯಾಗಿ ಕೆಲಸ ಮಾಡದ ರೋಬೋಯಾಗಿ ಇರುತ್ತಾನೆ. ಕೆಲವುಸಲ ರೋಬೋ ಮಾತನಾಡುತ್ತಿರುವಾಗ ಮಾತುಗಳಿಗೆ ಬದಲಾಗಿ ಗೊಣುಗುತ್ತಾ, ದೊಡ್ಡ ದೊಡ್ಡ ಶಬ್ದಗಳನ್ನು ಮಾಡುತ್ತಾ ತನ್ನ ಮಾತುಗಳನ್ನು ಮುಕ್ತಾಯಗೊಳಿಸುವನು. ಈತನು ಮುಂದಕ್ಕೆ ಹೋಗುವದಕ್ಕೆ ಯಾವಾಗಲೂ ತನ್ನ ಕೀಲುಗಳಿಗೆ ಎಣ್ಣೆ ಬೇಕಾಗಿರುತ್ತದೆ.
ಪ್ರತಿ ದಿನ ಕೇಪ್ಟೆನ್ ಮತ್ತು ರೋಬೋಗಳು ಆ ದಿನದ ಮುಖ್ಯಾಂಶವನ್ನು ಪರಿಚಯ ಮಾಡುವರು ಮತ್ತು ಅದಕ್ಕೆ ಯಾವ ರೀತಿ ಸ್ಪಂದಿಸಬೇಕೆಂದು ತಿಳಿಸಿಕೊಡುವರು. ಮಕ್ಕಳೆಲ್ಲರೂ ತಮ್ಮ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಕೇಳಿಸಿಕೊಳ್ಳುವಂಥೆ ಬಾಹ್ಯಾಕಾಶದ ಅನ್ವಯದ ಕುರಿತಾಗಿ ಕೇಪ್ಟೆನ್ ಪರಿಚಯ ಮಾಡುತ್ತಾನೆ.
ಪ್ರತಿ ದಿನ ವಿಬಿಎಸ್ ಆರಂಭವಾಗುವದಕ್ಕೋಸ್ಕರ ನಾಟಕದ ಆಲೋಚನೆಗಳು ಕೊಡಲ್ಪಟ್ಟಿವೆ, ಆದರೆ ನೀವು ಆ ದಿನವನ್ನು ಅವುಗಳೊಂದಿಗೆ ಮುಕ್ತಾಯಗೊಳಿಸಬಹುದು, ಅಥವಾ ಆಟದಲ್ಲಿ ಕೆಲವರು ಇರುವಂಥೆ ಮಾಡಿಕೊಳ್ಳಬಹುದು, ಅಥವಾ ತರಗತಿಗಳನ್ನು ಸಂದರ್ಶಿಸಲು ಸುತ್ತ ಮುತ್ತ ಹೋಗಬಹುದು. ಕೇಪ್ಟನ್ ಮತ್ತು ರೋಬೋಟ್ಗಳು ಬಂದು ಹೋಗುತ್ತಿರುವ ದೃಶ್ಯವನ್ನು ಕಾಣಲು ಮಕ್ಕಳೆಲ್ಲರೂ ಎಷ್ಟೋ ಸಂತೋಷಪಡುವರು.
ನಟನೆಯಲ್ಲಿ ಜೀವಿಸಿರಿ!
ಪ್ರತಿ ದಿನ ವಿದ್ಯಾರ್ಥಿಗಳೆಲ್ಲರೂ ಆ ದಿನಕ್ಕಾಗಿ ಒಂದು ಪದವನ್ನು ಕಲಿತುಕೊಳ್ಳುವರು ಮತ್ತು ಅದಕ್ಕೆ ನಟನೆಯಲ್ಲಿ ಪ್ರತಿಸ್ಪಂದನೆ ಇರುತ್ತದೆ. ಈ ಚಟುವಟಿಕೆಯು ತುಂಬಾ ಪ್ರಾಮುಖ್ಯವಾದದ್ದು, ಆದ್ದರಿಂದ ನಿಮ್ಮ ಮಕ್ಕಳು ಮುಖ್ಯ ಪ್ರಸಂಗ ಸಮಯದಲ್ಲಿ ಬೇಸರಗೊಳ್ಳುವದಿಲ್ಲ. ಇದರಿಂದ ನಿಮ್ಮ ವಿಬಿಎಸ್ ಕಾರ್ಯಕ್ರಮವು ಒಂದು ಪ್ರತ್ಯೇಕವಾದ ಕಾರ್ಯಕ್ರಮವನ್ನಾಗಿ ಮಾಡುವದು. ನಿಮ್ಮ ವಿಬಿಎಸ್ ಕಾರ್ಯಕ್ರಮದಲ್ಲಿ, ನಾಯಕನು ಆ ದಿನದ ಮುಖ್ಯ ಪದವನ್ನು ಹೇಳಿದಾಗ, ಮಕ್ಕಳಿಗೆ ಅದಕ್ಕೆ ನಟನೆಯಲ್ಲಿ ಸ್ಪಂದಿಸುವ ವಿಧಾನ ತಿಳಿದರಬೇಕು, ಹೀಗೆ ಕಾರ್ಯಕ್ರಮವೆಲ್ಲಾ ನಡೆಯುತ್ತದೆ. ಅವರು ಇದನ್ನೆಲ್ಲಾ ಕೇಪ್ಟೆನ್ ಮತ್ತು ರೋಬೋರವರೊಂದಿಗೆ ನಾಟಕ ನಡೆಯುತ್ತಿರುವಾಗ ಕಲಿತುಕೊಳ್ಳುವರು. ಮತ್ತು ಉಳಿದ ದಿನವೆಲ್ಲಾ ನೀವು ಇದನ್ನು ನೋಡುವಿರಿ.
ಸಂದೇಶ ವ್ಯವಸ್ಥೆ
ಪಾಠ 1
ನಾಯಕನ: “ದೇವರನ್ನು ಕರೆ!
ವಿದ್ಯಾರ್ಥಿ: ಈ ಪಾಠವು ನಡೆಯುತ್ತಿರುವಾಗಲೇ, ಪ್ರತಿಸಾರಿ ವಿದ್ಯಾರ್ಥಿಗಳೆಲ್ಲರು “ದೇವರಿಗೆ ಮೊರೆಯಿಡು” ಎಂದು ಕೇಳಬೇಕು, ಅದಕ್ಕೆ ಅವರೆಲ್ಲರೂ “ಕರ್ತನೇ, ನನಗೆ ಸಹಾಯ ಮಾಡು!” ಎಂದು ಜಿಗಿಯುತ್ತಾ, ಅವರ ಎರಡು ಕೈಗಳನ್ನು ದೇವರ ಕಡೆಗೆ ಚಾಚಿ ಹೇಳಬೇಕು..
ಸಂದೇಶ ವ್ಯವಸ್ಥೆ
ಪಾಠ 2
ನಾಯಕನ: “ದೇವರಿಗೆ ಸ್ಪಂದಿಸು!”
ವಿದ್ಯಾರ್ಥಿ: ಈ ಪಾಠವು ನಡೆಯುತ್ತಿರುವಾಗ, ಪ್ರತೀಸಾರಿ ವಿದ್ಯಾರ್ಥಿಗಳು “ದೇವರಿಗೆ ಸ್ಪಂದಿಸು” ಎಂದು ಕೇಳಬೇಕು, ಅದಕ್ಕೆ ಅವರೆಲ್ಲರೂ “ಹೌದು, ಕರ್ತನೇ” ಎಂದು ತಮ್ಮ ಕೈಗಳನ್ನು ತಮ್ಮ ಕಿವಿಗಳ ಹತ್ತಿರ ಇಟ್ಟುಕೊಂಡು ಹೇಳಬೇಕು (ಕೇಳುತ್ತಿರುವ ಅಭಿನಯ). ಆದನಂತರ, “ನಾನು ಇಲ್ಲಿದ್ದೇನೆ!” ಎಂದು ಹೇಳುವಾಗ ಅವರ ಎರಡು ಕಾಲುಗಳನ್ನು ಸೈನಿಕನಂಥೆ ಹತ್ತಿರವಿಟ್ಟುಕೊಳ್ಳಬೇಕು.
ಸಂದೇಶ ವ್ಯವಸ್ಥೆ
ಪಾಠ 3
ನಾಯಕನ: “ದೇವರಿಗೆ ವಿಧೇಯತೆಯನ್ನು ತೋರಿಸು!”
ವಿದ್ಯಾರ್ಥಿ: ಪಾಠ ನಡೆಯುತ್ತಿರುವಾಗ “ದೇವರಿಗೆ ವಿಧೇಯನಾಗು” ಎಂದು ಕೇಳಿದ ಪ್ರತಿಸಲ ವಿದ್ಯಾರ್ಥಿಗಳು “ನಾನು ಸಾಗುತ್ತಿರುವೆನು” ಎಂದು ಹೇಳಿ ಎದ್ದು ನಿಂತು, ಅವರವರ ಸ್ಥಾನಗಳನ್ನು ಬೇರೆ ವಿದ್ಯಾರ್ಥಿಗಳೊಂದಿಗೆ ಬದಲಿಸಿಕೊಳುತ್ತಾ ಇರಬೇಕು.
ಸಂದೇಶ ವ್ಯವಸ್ಥೆ
ಪಾಠ 4
ನಾಯಕನ: “ದೇವರಲ್ಲಿ ಭರವಸವಿಡು!”
ವಿದ್ಯಾರ್ಥಿ: ಈ ಪಾಠವು ನಡೆಯುತ್ತಿರುವಾಗಲೇ, ಪ್ರತಿಸಾರಿ ವಿದ್ಯಾರ್ಥಿಗಳೆಲ್ಲರು "ದೇವರಲ್ಲಿ ನಿರೀಕ್ಷಿಸು" ಎಂದು ಕೇಳಬೇಕು, ಅದಕ್ಕೆ ಅವರೆಲ್ಲರೂ "ನಾನು ಸಿದ್ಧವಾಗಿದ್ದೇನೆ" ಎಂದು ಜಿಗಿಯುತ್ತಾ, ಅವರ ಎರಡು ಕೈಗಳನ್ನು ಬಾಕ್ಸಿಂಗ್ ಆಡುವಂತೆ ತಮ್ಮ ಕೈಗಳನ್ನು ಆಡಿಸಿ ಹೇಳಬೇಕು, ಮತ್ತು ಒಬ್ಬರ ಕೈಗಳನ್ನು ಮತ್ತೊಬ್ಬರು ಹಿಡಿದುಕೊಂಡು ಕೇಳಗೆ ಕುಳಿತು "ಆದರೆ ನಾನು ಕಾದಿರ ಬೇಕು" ಎಂದು ಹೇಳಬೇಕು.
ಸಂದೇಶ ವ್ಯವಸ್ಥೆ
ಪಾಠ 5
ನಾಯಕನ: “ದೇವರನ್ನು ಆರಾಧಿಸು!”
ವಿದ್ಯಾರ್ಥಿ:ಪಾಠದಲ್ಲಿ "ದೇವರನ್ನು ಆರಾಧಿಸು" ಎಂದು ಕೇಳಿದ ಪ್ರತಿಯೊಂದು ಬಾರಿ, ಮಕ್ಕಳು ಪ್ರತಿಕ್ರಿಯೆ ನೀಡಲು "ನಾನು ನಿನ್ನನ್ನೇ ಆರಾಧಿಸುವೆನು" ಎಂದು ಹೇಳಿ ಅವರ ಕೈಗಳನ್ನು ಆಕಾಶದ ಕಡೆಗೆ ಎತ್ತಿ ಆಕಡೆ ಮತ್ತು ಈಕಡೆ ಆಡಿಸಬೇಕು.
ಆಟಗಳು
ಈ ಕಾರ್ಯಕ್ರಮಕ್ಕಾಗಿ ಮಾಡಿದ ಈ ಆಟಗಳನ್ನೆಲ್ಲಾ ಒಂದು ದೊಡ್ಡ ಗುಂಪುನೊಳಗೆ ಎಲ್ಲಾ ಮಕ್ಕಳು ಕುಳಿತುಕೊಂಡಾಗ ಮತ್ತು ಗುಂಪುಗಳಾಗಿ ಪ್ರತ್ಯೇಕಿಸಲ್ಪಟ್ಟಾಗ ಆಡಿಸಬೇಕಾಗಿರುತ್ತದೆ. (ನೀವು 2 ರಿಂದ 4 ಗುಂಪುಗಳಾಗಿ ವಿಂಗಡಿಸಬಹುದು). ಅತೀ ಸುಲಭಕರವಾದದ್ದೇನೆಂದರೆ, ಹುಡಿಗಿಯರ ಗುಂಪಿಗೆ ವಿರುದ್ಧವಾಗಿ ಹುಡುಗರ ಗುಂಪನ್ನು ನಿಲ್ಲಿಸಬಹುದು. ಪ್ರತಿಯೊಂದು ಆಟಕ್ಕೂ, ತಮ್ಮ ತಂಡದ ಪರವಾಗಿ ಆಟ ಆಡಲು ತಮ್ಮ ತಂಡಗಳಿಂದ ಕೆಲವರನ್ನು ಕಲುಹಿಸಿಕೊಡುವರು, ಉಳಿದವರೆಲ್ಲರೂ ತಾವು ಕುಳಿತುಕೊಂಡ ಕುರ್ಚಿಗಳಿಂದ ನಗುತ್ತಾ, ಕಿರುಚುತ್ತಾ ತಮ್ಮ ತಂಡದವರನ್ನು ಉತ್ಸಾಹಪಡಿಸುವರು. ಇದರಿಂದ ಮಕ್ಕಳು ಬೇಸರಗೊಳ್ಳುವದಿಲ್ಲ, ಆಟ ಆಡಿದವರನ್ನು ಪಕ್ಕಕ್ಕೆ ಇಟ್ಟು, ಆಟ ಆಡದವರನ್ನು ಸೇರಿಸಿಕೊಳ್ಳುತ್ತಾ ಪ್ರತಿ ದಿನ ಅತೀ ಕಡಿಮೆ ಸಮಯದಲ್ಲಿ ವಿವಿಧವಾದ ಆಟಗಳನ್ನು ಆಡಿಸಿರಿ.
ಆಟಗಳಲ್ಲಿ ಮೊದಲ ಸಾಲಿನಲ್ಲಿರಲು ಭಾಗವಹಿಸುವ ವಿದ್ಯಾರ್ಥಿಗಳನ್ನು ಆರಿಸಿಕೊಳ್ಳುವದಕ್ಕೆ ಒಂದು ಆಲೋಚನೆ, ಅದೇನಂದರೆ, ನಿಮ್ಮ ವಿಬಿಎಸ್ನಲ್ಲಿ ಇತರ ಚಟುವಟಿಕೆಗಳಲ್ಲಿ ಚುರುಕುತನದಿಂದ ಇರುವ ವಿದ್ಯಾರ್ಥಿಗಳನ್ನು ನೋಡಿರಿ. ಈ ವಿದ್ಯಾರ್ಥಿಗಳು ಆಟ ಆಡುವಂಥೆ ಏನಾದರೊಂದನ್ನು ಮಾಡಿರಿ. ಅದು ಹೇಗೆಂದರೆ, ಅವರ ಕುತ್ತಿಗೆಗಳಿಗೆ ಯಾವುದಾದರೊಂದನ್ನು ಇಳಿ ಹಾಕಲು ಮಾಡಿರಿ, ಅವರ ಮಣಿಕಟ್ಟುಗಳಿಗೆ ಏನಾದರೊಂದನ್ನು ಕಟ್ಟಿರಿ, ಅಥವಾ ಅವರ ಜೇಬುಗಳಲ್ಲಿ ಒಂದು ಕಾರ್ಡನ್ನು ಹಾಕಿರಿ.
ಪ್ರತಿ ಆಟಕ್ಕಾಗಿ, ಎಷ್ಟು ಸಮಯವನ್ನು ಸಿದ್ಧಗೊಳಿಸಿದರೆ ಅಷ್ಟು ಚೆನ್ನಾಗಿ ಆಟಗಳು ಇರುತ್ತವೆ. ಈ ಆಟಗಳನ್ನೆಲ್ಲಾ ನೀವು ಸಿದ್ಧಗೊಳಿಸುವಾಗ, “ಗೇಮ್ ಷೋ” ಅಥವಾ “ನಿಕೆಲೋಡಿಯಾನ್” ಟಿವಿ ಕಾರ್ಯಕ್ರಮಗಳ ಕುರಿತಾಗಿ ಆಲೋಚನೆ ಮಾಡಿರಿ. ನಿಮ್ಮ ವಿದ್ಯಾರ್ಥಿಗಳನ್ನು ಮೊದಲ ಸಾಲಿನಲ್ಲಿ ನಿಲ್ಲಿಸಲು ನೀವು ಧೈರ್ಯವನ್ನು ಪಡೆದುಕೊಳ್ಳುವಿರಿ, ಆಟಗಳಿಗಾಗಿ ಸೌಂಡ್ ಎಫೆಕ್ಟ್ ಇಟ್ಟುಕೊಂಡು ಅಥವಾ ಮ್ಯೂಜಿಕ್ (ಸಂಗೀತ) ಇಟ್ಟುಕೊಂಡರೆ ಚೆನ್ನಾಗಿರುತ್ತದೆ.
(ಗೆಲಾಕ್ಸಿ ಎಕ್ಸ್‌ಪ್ರೆಸ್ ಸೀಡಿನಲ್ಲಿ ನೀವು ಆಟವಾಡಲು ನಿಮಗಾಗಿ ಆಟದ ಸಮಯ ಹಾಡನ್ನು ನಾವು ಕೊಟ್ಟಿರುತ್ತೇವೆ.)
ನಿಮ್ಮ ವಿಬಿಎಸ್ಗೆ ನಿಜವಾಗಿ ವಿನೋದ ವಾತಾವರಣವನ್ನು ತರುವದಕ್ಕೆ ಅತೀ ಕಡಿಮೆ ಬೆಲೆಯ ವಸ್ತುಗಳನ್ನು ಉಪಯೋಗಿಸಿರಿ. ಸಿದ್ಧವಾಗಿರ್ರಿ ಮತ್ತು ವಿನೋದವನ್ನು ಪಡೆಯಿರಿ!
ಕಾಲಾನುಕ್ರಮ
(2½ ಗಂಟೆ ಕಾರ್ಯಕ್ರಮ)
ಸೇತುವೆ ದೊಡ್ಡ ಗುಂಪು (50 minutes)
- ಹಾಡುಗಳು (20 ನಿಮಿಷ)
- ವಿಸ್ಫೋಟನೆ! - ಪ್ರಾರಂಭದ ನಾಟಕ (10 ನಿಮಿಷ)
- ಮಿಷನ್ ಕಂಟ್ರೋಲ್ನಿಂದ ಅರ್ಜೆಂಟ್.. .- ಮುಖ್ಯ ಪಾಠ (20 ನಿಮಿಷ)
ಸ್ಟೇಷನ್ಗಳ ಸರದಿ - ಅದು ನಿಮ್ಮ ವಿಬಿಎಸ್ನಲ್ಲಿರುವ ಮಕ್ಕಳ ಸಂಖ್ಯೆಯ ಮೇಲೆ ಆಧಾರಪಟ್ಟಿರುತ್ತದೆ.(1 ಗಂಟೆ)
- ಕ್ಯಾಡೆಟ್ ತರಗತಿ - ವಿದ್ಯಾರ್ಥಿ ಪುಸ್ತಗಳನ್ನು ಮತ್ತು ಪಾಠಗಳನ್ನು ಮತ್ತೊಂದು ಬಾರಿ ನೋಡಿಕೊಳ್ಳುವ ಕೇಂದ್ರ. (20 ನಿಮಿಷ)
- ಇಂಜಿನೀರಿಂಗ್ - ಕಲಾ ಕೇಂದ್ರ (20 ನಿಮಿಷ)
- ಮೆಸ್ ಹಾಲ್ - ಅಲ್ಪಾಹಾರ ಕೇಂದ್ರ ಫ್ಯಾಕ್ಟಾಯಿಡ್ - ಅಲ್ಪಾಹಾರದ ಸಮಯದಲ್ಲಿ ಅಂತರಿಕ್ಷದ ಅನ್ವಯವನ್ನು ಚರ್ಚಿಸುವದು (20 ನಿಮಿಷ)
ಸೇತುವೆ ದೊಡ್ಡ ಗುಂಪು (30 ನಿಮಿಷ)
ಮುಕ್ತಾಯಗೊಳಿಸುವ ಹಾಡು ಮತ್ತು ಪ್ರಕಟನೆಗಳು. (10 ನಿಮಿಷ)
ಸ್ಟೇಷನ್ಗಳ ಸರದಿ
ಪ್ರತಿ ದಿನದ ಮಧ್ಯೆಯಲ್ಲಿ, ಮಕ್ಕಳೆಲ್ಲರೂ ಮೂರು ಗುಂಪುಗಳಾಗಿ ವಿಂಗಡಿಸಲ್ಪಡುವರು ತಮ್ತು ಸ್ಟೇಷನ್ಗಳೆಲ್ಲವುಗಳನ್ನು ಸುತ್ತಿ ಬರುತ್ತಾರೆ : ಅಲ್ಪಾಹಾರ ಕೊಠಡಿ (ಅಲ್ಪಾಹಾರ ಮತ್ತು ಬಾಹ್ಯಾಕಾಶದ ಅನ್ವಯ), ಇಂಜಿನೀರಿಂಗ್ (ಹಸ್ತ ಕಲಾ ಚಿತ್ರಗಳು) ಮತ್ತು ಕ್ಯಾಡೆಟ್ ತರಗತಿ (ವಿದ್ಯಾರ್ಥಿ ಪುಸ್ತಕಗಳು ಮತ್ತು ಪಾಠವನ್ನು ಪುನಃರ್ ಓದಿಕೊಳ್ಳುವದು).
ಇನ್ನೊಂದು ಪುಟದಲ್ಲಿ ಈ ಸ್ಟೇಷನ್ಗಳ ಕುರಿತಾಗಿ ಹೆಚ್ಚಾದ ಮಾಹಿತಿಯನ್ನು ಓದಿರಿ.
ವಿಸ್ಫೋಟನೆ!
ಪ್ರಾರಂಭದ ನಾಟಕ - ಅಲ್ಪಾಹಾರದ ಸಮಯದಲ್ಲಿ ಬಾಹ್ಯಾಕಾಶದ ಅನ್ವಯದ ಕುರಿತಾಗಿ ಚರ್ಚೆ ಮಾಡುವದು
ಇಲ್ಲಿ ನೀವು ಅಲ್ಪಾಹಾರವನ್ನು ಯಾವ ರೀತಿ ತಯಾರಿಸಬೇಕೆನ್ನುವದರ ಬಗ್ಗೆ ಕೆಲವು ನಿಯಮಗಳನ್ನು ಕಂಡುಕೊಳ್ಳುವಿರಿ. ಅದನ್ನು ತಿನ್ನುವದಕ್ಕೆ ಮುಂಚಿತವಾಗಿ ಹಸ್ತ ಕಲಾ ವಸ್ತುಗಳನ್ನು ಮಾಡುವದಕ್ಕೆ ಮಕ್ಕಳು ಹೇಗೆ ಸಂತೋಷಪಟ್ಟಿರುತ್ತಾರೋ ಹಾಗೆಯೇ ಆ ಅಲ್ಪಾಹಾರವನ್ನು ತಯಾರಿಸುವಕ್ಕೂ ವಿದ್ಯಾರ್ಥಿಗಳು ಅಷ್ಟು ಸಂತೋಷಪಡಬೇಕೆಂದು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರ್ರಿ. ತಮ್ಮಷ್ಟಕ್ಕೆ ತಾವೇ ಅಲ್ಲಿ ಸ್ವಚ್ಛಗೊಳಿಸಿಕೊಳ್ಳಬೇಕೆಂದು ಅವರಿಗೆ ಬೋಧಿಸುವ ಅವಕಾಶವನ್ನು ಮಾತ್ರ ಬಿಟ್ಟುಕೊಳ್ಳಬೇಡಿರಿ.
ಫ್ಯಾಕ್ಟಾಯಿಡ್ - ಅಲ್ಪಾಹಾರದ ಸಮಯದಲ್ಲಿ ಅಂತರಿಕ್ಷದ ಅನ್ವಯವನ್ನು ಚರ್ಚಿಸುವದು
ಅಲ್ಪಾಹಾರದ ಸಮಯದಲ್ಲಿ, ವಿದ್ಯಾರ್ಥಿಗಳೊಂದಿಗೆ ಬಾಹ್ಯಾಕಾಶದ ಅನ್ವಯದ ಕುರಿತಾಗಿ ಚರ್ಚೆ ಮಾಡಿರಿ, ಅದು ಪಾಠಕ್ಕೆ ಹೇಗೆ ಸಂಬಂಧಿಸುತ್ತದೆ ಎಂದು ಕೇಳಿರಿ ಮತ್ತು ಅವರ ದೈನಂದಿನ ಜೀವನಗಳಿಗೆ ಹೇಗೆ ಅನ್ವಯವಾಗುತ್ತದೆಯೆಂದು ಚರ್ಚಿಸಿರಿ. ಅಲ್ಪಾಹಾರ ಮತ್ತು ಬಾಹ್ಯಾಕಾಶದ ಅನ್ವಯದ ಕುರಿತಾದ ಮಾಹಿತಿಯನ್ನು ನೀವು ಅಲ್ಪಾಹಾರದ ಕೊಠಡಿಯ ನಾಯಕನ ಕರಪತ್ರದಲ್ಲಿಯೂ ಕಂಡುಕೊಳ್ಳಬಹುದು.
ಮೆಸ್ ಹಾಲ್
ಅಲ್ಪಾಹಾರ ಕೇಂದ್ರ
ಹಸ್ತ ಕಲಾ ಚಿತ್ರಕ್ಕಾಗಿ ಇಲ್ಲಿ ನೀವು ಕೆಲವು ಸಲಹೆಗಳು ಮತ್ತು ನಿಯಮಗಳೊಂದಿಗೆ ಒಂದು ಆಲೋಚನೆಯನ್ನು ಪಡೆಯುವಿರಿ. ಗೆಲಾಕ್ಸಿ ಎಕ್ಸ್‌ಪ್ರೆಸ್ ವಿಬಿಎಸ್ ಕಾರ್ಯಕ್ರಮದಲ್ಲಿರುವ ಎಲ್ಲಾ ಹಸ್ತ ಕಲಾ ವಸ್ತುಗಳೆಲ್ಲವೂ ಪ್ರತಿಯೊಂದು ಹಸ್ತ ಕಲಾ ಚಿತ್ರಕ್ಕಾಗಿ ಒಂದು ಕಾಗದವನ್ನು ಉಪಯೋಗಿಸುವಂಥೆ ಡಿಜೈನ್ ಮಾಡಲಾಗಿವೆ. ಅವುಗಳನ್ನು ತುಂಬಾ ಬೆಲೆಯುಳ್ಳ ವಸ್ತುಗಳನ್ನಾಗಿ ನಾವು ಕಾಪಾಡಿಕೊಳ್ಳಬೇಕು. ಆನ್ಲೈನ್ನಲ್ಲಿ ಮಾದರಿಗಳನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ನಿರ್ದೇಶಕರ ಕೈಪಿಡಿಯಲ್ಲಿಯೂ, ಇಂಜಿನೀರಿಂಗ್ ನಾಯಕನ ಕರಪತ್ರದಲ್ಲಿಯೂ ಹಸ್ತ ಕಲಾ ವಸ್ತುಗಳ ಮಾಹಿತಿಯನ್ನು ಕಂಡುಕೊಳ್ಳಬಹುದು. ಇಂಜಿನೀರಿಂಗ್ ನಾಯಕನ ಕರಪತ್ರದಲ್ಲಿ ಜೆರಾಕ್ಸ್ ಮಾಡಿಕೊಳ್ಳುವದಕ್ಕೆ ಮಾದರಿಗಳನ್ನು ಕೂಡಾ ಕಂಡುಕೊಳ್ಳಬಹುದು.
ಕ್ಯಾಡೆಟ್ ತರಗತಿ
ವಿದ್ಯಾರ್ಥಿ ಪುಸ್ತಗಳನ್ನು ಮತ್ತು ಪಾಠಗಳನ್ನು ಮತ್ತೊಂದು ಬಾರಿ ನೋಡಿಕೊಳ್ಳುವ ಕೇಂದ್ರ.
ಚಿಹ್ನೆಯ ಭಾಷೆಯಲ್ಲಿ ಬೈಬಲ್ ಕಥೆಯಿಂದ ಕೆಲವು ಮುಖ್ಯ ಪದಗಳಿಗಾಗಿ ನಿಯಮಗಳನ್ನು ನೀವಿಲ್ಲಿ ಕಾಣಬಹುದು. ಕಥೆಯನ್ನು ಪುನಃ ನೋಡಿರಿ, ಈ ಚಿಹ್ನೆ ಭಾಷೆಯಲ್ಲಿ ಈ ಪದಗಳನ್ನು ಬೋಧಿಸಿರಿ. ಆದನಂತರ ವಿದ್ಯಾರ್ಥಿ ಪುಸ್ತಕಗಳನ್ನು ಪಾಸ್ ಮಾಡಿ ಮತ್ತು ಪಜಿಲ್ಗಳೊಂದಿಗೆ ಯಾರನನ್ನಾದರೂ ಸಹಾಯಕ್ಕಾಗಿ ಇಟ್ಟುಕೊಳ್ಳಿರಿ. ಈ ಮಾಹಿತಿಯೆಲ್ಲಾ ಕ್ಯಾಡೆಟ್ ತರಗತಿಯ ನಾಯಕನ ಕರಪತ್ರದಲ್ಲಿ ಕೂಡಾ ನಿಮ್ಮ ಸಿಕ್ಕುವದು.
ಉದಾಹರಣೆ: ಕುಟುಂಬ
ಹೆಬ್ಬೆರಳು ಮತ್ತು ತೋರು ಬೆರಳುಗಳನ್ನು ಮುಟ್ಟಿಸು, ಕೈಗಳು ಮುಟ್ಟುವವರೆಗೂ ಹೊರಗಿನ ವೃತ್ತವನ್ನು ಎಳೆಯಿರಿ.