ಹಿರಿಯ ಮತ್ತು ಆಧುನಿಕ ಪುಸ್ತಕಗಳನ್ನು ಉಪಯೋಗಿಸುತ್ತಿರುವ ವಿದ್ಯಾರ್ಥಿಗಳಿಗಾಗಿ
ಪ್ರತಿ ವಾರ ಪಾಠಕ್ಕೆ ಅನ್ವಯವಾಗುವಂಥೆ ವಿದ್ಯಾರ್ಥಿ ಪುಸ್ತಕಗಳಲ್ಲಿ ರಹಸ್ಯ ಸಂದೇಶವಿರುತ್ತದೆ. ವಿದ್ಯಾರ್ಥಿ ಪುಸ್ತಕಗಳ ಹಿಂಭಾಗದ ಪುಟದ ಮೇಲೆ (ದೊಡ್ಡ ವಿದ್ಯಾರ್ಥಿಗಳಿಗೆ ಮಾತ್ರ) ಡಿಕೋಡರ್ ಬೀಗ ಇರುತ್ತದೆ. ಪುಸ್ತಕದ ಹಿಂಭಾಗದಲ್ಲಿರುವ ಡಿಕೋಡರ್ ಬೀಗವನ್ನು ಕತ್ತರಿಗಳಿಂದ ತೆಗೆದುಕೊಳ್ಳಿರಿ ಮತ್ತು 13 ವಾರಗಳಲ್ಲಿನ ಪ್ರತಿಯೊಂದು ಪಾಠಕ್ಕೆ ಅದನ್ನು ಉಪಯೋಗಿಸಿರಿ. ಆ ಪುಸ್ತಕಗಳಿಗೆ ಕಾಂಟಾಕ್ಟ್ ಪೇಪರ್ಯಿಂದಾಗಲಿ ಅಥವಾ ಲ್ಯಾಮಿನೇಟ್ ಮಾಡುವದರಿಂದಾಗಲಿ ಕವರ್ ಹಾಕಿರಿ, ಇದರಿಂದ ಅವು 3 ತಿಂಗಳವರೆಗೂ ಹರಿದು ಹೋಗದಂಥೆ ಇರುತ್ತವೆ. ನಿಮ್ಮ ವಿದ್ಯಾರ್ಥಿಗಳಿಗೆ ಕೊಟ್ಟು ಅವುಗಳನ್ನು ಮನೆಗಳಿಗೆ ಕಳುಹಿಸಬೇಡಿರಿ, ಅವುಗಳನ್ನು ನಿಮ್ಮ ಸಭೆಯ ಭವನದಲ್ಲಿ ಭದ್ರವಾಗಿಟ್ಟುಕೊಳ್ಳಿರಿ. ಹೀಗೆ ಮಾಡುವದರಿಂದ ಅವರು ಪ್ರತಿವಾರ ಬಂದು ಬರೆದುಕೊಳ್ಳುವದಕ್ಕೆ ಅವಕಾಶವಿರುತ್ತದೆ.
ರಹಸ್ಯ ಸಂದೇಶವನ್ನು ಕಂಡುಹಿಡಿಯಲು, ನೀವು ನೋಡುವಂಥಹ ಗೊಂಬೆಯ ಕಡೆಗೆ ಬೀಗವನ್ನಿಡುವದರಿಂದ ಒಂದು ಬಾಣವನ್ನಿಡಿರಿ. (ಉದಾಹರಣೆಗಾಗಿ ಬಲಗಡೆಗೆ ನೋಡಿರಿ) ನಿಮ್ಮ ವಿದ್ಯಾರ್ಥಿಯ ಪುಸ್ತದಲ್ಲಿರುವ ಬಾಣವು ಉತ್ತರವನ್ನು ಹೇಳಲು ತೋರಿಸುವದು.
ವಾಕ್ಯವನ್ನು ಕಂಡುಹಿಡಿಯಿರಿ
ಪುಟದಲ್ಲಿ ಎಲ್ಲೋ ಒಂದರ ಭಾಗದಲ್ಲಿ ಮರೆಯಾಗಿರುವ ರಹಸ್ಯ ಸಂದೇಶವು ಪ್ರತಿ ವಾರವು ಇರುತ್ತದೆ. ನಿಮ್ಮ ಹತ್ತಿರವಿರುವ ರಹಸ್ಯ ಡಿಕೋಡರ್ನಿಂದ ಅದನ್ನು ಪರಿಶೀಲಿಸಿರಿ ಮತ್ತು ಪ್ರತಿಯೊಂದು ಅಕ್ಷರವನ್ನು ಕಂಡುಹಿಡಿಯಿರಿ ಮತ್ತು ನಿಮಗೆ ಕೊಟ್ಟಿರುವ ಒಗಟನ್ನು ಪರಿಷ್ಕರಿಸಿರಿ. ನಿಮಗೆ ಕೊಡಲ್ಪಟ್ಟಿರುವ ಸ್ಥಳದಲ್ಲಿ ಪ್ರತಿ ವಾರದಿಂದ ಒಂದೊಂದು ಅಕ್ಷರವನ್ನು ಜೋಡಿಸಿರಿ. ಈ ವಿಭಾಗದ ಕೊನೆಗೆ ನೀವು ಉತ್ತರವನ್ನು ಪಡೆದುಕೊಳ್ಳುವಿರಿ!
ಕಷ್ಟ ಮತ್ತು ಮುಂದುವರಿದ ಪುಸ್ತಕಗಳಲ್ಲಿ ಸಂಕೇತಗಳು ನೋಡಿ