Warning: include_once(../analyticstracking.php): failed to open stream: No such file or directory in /hermes/bosnacweb09/bosnacweb09ay/b2512/ipw.pro-vism/public_html/InternationalWebsite/kannada/farm/theme-header.php on line 69

Warning: include_once(): Failed opening '../analyticstracking.php' for inclusion (include_path='.:/usr/share/php') in /hermes/bosnacweb09/bosnacweb09ay/b2512/ipw.pro-vism/public_html/InternationalWebsite/kannada/farm/theme-header.php on line 69
 

ಹೊಲಕ್ಕೆ ಹೋಗೋಣ ವಿಬಿಎಸ್

“ಹೊಲಕ್ಕೆ ಹೋಗೋಣ” ವಿಬಿಎಸ್ ಗೆ ಸ್ವಾಗತ, ಇಲ್ಲಿ ನಾವು ಪೇತ್ರನ ಜೀವಿತ ಮತ್ತು ಜೀವಿತದಲ್ಲಿ ಒಳ್ಳೆಯ ಆಯ್ಕೆಗಳನ್ನು ಮಾಡಿಕೊಳ್ಳುವದರ ಬಗ್ಗೆ ಕಲಿತುಕೊಳ್ಳೋಣ! ದ್ರಾಕ್ಷೇತೋಟದ ಆಟಗಳು,  ಹೊಲದ ಕರಕುಶಲಗಳು, ಸಿಲೋ ತರಗತಿಗಳು ಮತ್ತು ಪೇತ್ರನೊಂದಿಗಿನ ಪ್ರವಾಸದ ಮೂಲಕ ಹೊಲದಲ್ಲಿ ಸಂತೋಷಿಸೋಣ! ಯೇಸು ಕ್ರಿಸ್ತನು ಮತ್ತು ಪೇತ್ರನನ್ನು ನೀವು ನಿಮ್ಮ ಸಭೆಗೆ ಆಹ್ವಾನಿಸಬಹುದು. ಸತ್ಯವೇದ ಸಮಯದನುಸಾರವಾದ ವಸ್ತ್ರಾಲಂಕಾರಗಳನ್ನು ಸೃಷ್ಟಿಸುವದು ಸುಲಭವಾದ ಕಾರ್ಯವಾಗಿದೆ.

ಯೇಸು ಕ್ರಿಸ್ತನೇ ದ್ರಾಕ್ಷೇಬಳ್ಳಿ ಮತ್ತು ನಾವು ಕೊಂಬೆಗಳು ಎಂಬದನ್ನು ಮನವರಿಕೆ ಮಾಡಿಕೊಂಡವರಾಗಿ; ಸ್ನೇಹಿತರ ನಡುವೆ ಚಪ್ಪಾಳೆಗಳ ಮೂಲಕ ಅದ್ಭುತವಾಗಿ ಸ್ವಾಗತಿಸಿಕೊಳ್ಳುವದು, ಕ್ರಿಯೆಗಳೊಂದಿಗೆ ಹೊಸ ಹಾಡುಗಳು, ಆಧುನಿಕ ಕಾಲದ ಕೆಲವು ತಮಾಷೆಯ ನಾಟಕಗಳು ಮತ್ತು ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಅವಕಾಶಕ್ಕಾಗಿ, ನಿಮ್ಮ ಸಭೆಯಲ್ಲಿ ನಡೆಯುವ ದೊಡ್ಡ ಕಾರ್ಯಕ್ಕಾಗಿ ಸಿದ್ಧಗೊಳ್ಳಿರಿ. ಜೆನ್ನಿಯವರು ಸಿದ್ಧಪಡಿಸಿರುವ ನಾಲ್ಕು ಹೊಸ ವಿದ್ಯಾರ್ಥಿ ಪುಸ್ತಕಗಳಲ್ಲಿರುವ ಐದು ಪ್ರಮುಖ ಅಂಶಗಳ ಮೂಲಕ ಒಳ್ಳೆಯ ಆಯ್ಕೆಗಳನ್ನು ಮಾಡಿಕೊಳ್ಳುವದು ಹೇಗೆ ಎಂಬದನ್ನು ಇಡೀ ಸಭೆ ಮಕ್ಕಳೊಂದಿಗೆ ತಿಳಿದುಕೊಳ್ಳಬಹುದಾಗಿದೆ:

೧. ನಾನು ನಂಬುವ ಆಯ್ಕೆ ಮಾಡಿಕೊಂಡಿದ್ದೇನೆ. ೨. ನಾನು ಬದಲಾಗುವ ಆಯ್ಕೆ ಮಾಡಿಕೊಂಡಿದ್ದೇನೆ. ೩. ನಾನು ವಿಧೇಯನಾಗುವ ಆಯ್ಕೆ ಮಾಡಿಕೊಂಡಿದ್ದೇನೆ. ೪. ನಾನು ಕ್ರಿಯೆ ಮಾಡುವ ಆಯ್ಕೆ ಮಾಡಿಕೊಂಡಿದ್ದೇನೆ
೫. ನಾನು ಆತುಕೊಳ್ಳುವ ಆಯ್ಕೆ ಮಾಡಿಕೊಂಡಿದ್ದೇನೆ