ಹೋಮ್ ಪರಿಶೋಧಕರು ಸಂಡೇ ಸ್ಕೂಲ್
ಭೂತಗನ್ನಡಿಯನ್ನು ಮತ್ತು ಡಿಕೋಡರನ್ನು ತಗೆದುಕೊಳ್ಳಿರಿ ಏಕೆಂದರೆ.....
... ಈಗ ದೇವರ ವಾಕ್ಯದಲ್ಲಿ ಪ್ರವೇಶಿಸುವ ಸಮಯವಾಗಿದೆ.
ಅನೇಕ ವರ್ಷಗಳ ಹಿಂದೆ ನಾವು ಮಕ್ಕಳೊಂದಿಗೆ ಮಾತ್ರ ಈ ಸೇವೆಯನ್ನು ಆರಂಭಿಸಿದ ದಿನಗಳಲ್ಲಿ ಈ ಮಾಹಿತಿಯನ್ನು ಬರೆದಿದ್ದೇನೆ ಮತ್ತು ಈ ಮೊದಲನೇ ಸಂಡೇ ಸ್ಕೂಲ್ಗೆ ಹಿಂತಿರುಗಿ ಬರುವದು ಎಷ್ಟೋ ಸಂತೋಷವನ್ನುಂಟು ಮಾಡುತ್ತಿದೆ. ಮೆಕ್ಸಿಕೋನ ಸೊನೋರನಲ್ಲಿ ನಮ್ಮ ಮೊದಲನೇ ವರ್ಷದಲ್ಲಿ, ಉಪ್ಪಿನ ಧೂಳಿಯಿಂದ ತುಂಬಿರುವ ದೊಡ್ಡ ಸ್ಥಳದಲ್ಲಿ ನೂಕುವ ಮನೆಯಲ್ಲಿ ನಾವು ನಿವಾಸವಾಗಿದ್ದೆವು… ಆ ಸ್ಥಳದಲ್ಲಿ ಮರಗಳಿಲ್ಲ, ಪ್ರವಹಿಸುವ ನೀರಿದ್ದಿಲ್ಲ ಮತ್ತು ವಿದ್ಯುತ್ ಕೂಡಾ ಇದ್ದಿಲ್ಲ. ಆದರೆ ಮಾಹಿತಿಯೆಲ್ಲವೂ ಕೂಡ ಆ ಸಮಯದಲ್ಲಿ ಹುಟ್ಟಿ ಬಂದಿತು. ಆ ದಿನಗಳಲ್ಲಿ ಕೊನೆಯ ಪಾಠದವರೆಗೂ ನಾನು ಬರೆದು ಮುಗಿಸಿದ್ದೇನೆ. ಮಕ್ಕಳ ಸೇವೆಗಾಗಿ ಬರೆಯುವದನ್ನು ಮುಂದೆವರಿಸಬೇಕೆಂದು ದೇವರು ನನ್ನೊಂದಿಗೆ ಮಾತನಾಡಿದರು. ಈ ಸೇವೆಯಲ್ಲಿ ನನ್ನ ಕರೆಯೇನೆಂಬುವದನ್ನು ಈ ಪಾಠ್ಯ ಪ್ರಣಾಳಿಕೆಯೊಂದಿಗೆ ಆರಂಭವಾಯಿತು : ಕ್ರಿಸ್ತನ ದೇಹಕ್ಕೆ ಬೆಲೆಯುಳ್ಳ ಸಾಧನೆಗಳನ್ನು ಕೊಡುವದು ಮತ್ತು ಸಂಪುರ್ಣ ಭಕ್ತಿಯಿಂದ ಕ್ರಿಸ್ತನನ್ನು ಹಿಂಬಾಲಿಸುವ ಹೊಸ ತಲೆಮಾರಿಯನ್ನು ಎಬ್ಬಿಸುವದಕ್ಕೆ ಸಹಾಯ ಮಾಡುವದು ನನ್ನ ಕರೆಯಾಗಿದೆ. ನಾನು ಬರೆದಿರುವ ಮಾಹಿತಿಯಿಂದ ಕೆಲವು ವಿಷಯಗಳನ್ನು ನಾವು ಮಾರ್ಪಾಟು ಮಾಡಿದ್ದೇವೆ : ಕೆಲವು ಪಜಿಲ್ಗಳು, ಹಸ್ತಕಲಾ ವಸ್ತುಗಳು ಮತ್ತು ತುಂಬಾ ಆಕರ್ಷಿಕವಾದ ಡಿಜೈನ್ಗಳನ್ನು ಇಟ್ಟಿದ್ದೇವೆ. ಆದರೆ ಡಿಕೋಡರ್ ಬೀಗದಿಂದ ರಹಸ್ಯ ಸಂದೇಶವನ್ನು ಪ್ರತಿವಾರ ಕಂಡುಹಿಡಿಯುವದೆನ್ನುವದು ಮಕ್ಕಳಿಗೆ ಮೊಟ್ಟ ಮೊದಲನೇಯದಾಗಿ ಪರಿಚಯ ಮಾಡುತ್ತಿರುವದಿರಂದ ಅವರಿಗೆ ತುಂಬಾ ವಿನೋದಾತ್ಮಕವಾಗಿ ಇರುತ್ತದೆ.
ಈ ಮಾಹಿತಿಯನ್ನು 30 ಸಭೆಗಳೊಂದಿಗೆ ಆರಂಭಿಸಿ, ಈಗ ಪ್ರಪಂಚದಾದ್ಯಂತ ನೂರಕ್ಕೆ ಸೇರಿ, ಸಾವಿರಾರು ಸಭೆಗಳಿಗೆ ತಲುಪುತ್ತಿದೆ. ನನ್ನನ್ನು ದೇವರು ಈ ರೀತಿಯಾಗಿ ನಡೆಸಿದ್ದಕ್ಕಾಗಿ ದೇವರಿಗೆ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ ಮತ್ತು ನನ್ನ ಜೀವನದಲ್ಲಿ ದೇವರು ಇಟ್ಟಿರುವ ಕರೆಗೆ ನಾನು ವಿಧೇಯತೆಯನ್ನು ತೋರಿಸಿರುವದಕ್ಕಾಗಿ ಎಷ್ಟೋ ಕೃತಜ್ಞತೆಯಿಂದ ಇದ್ದೇನೆ.
ಮತ್ತಾಯನ ಬರೆದ ಸುವಾರ್ತೆಯಲ್ಲಿನ ಯೇಸುಕ್ರಿಸ್ತನ ಸಾಮ್ಯಗಳು ಯಾವಾಗಲೂ ನನಗೆ ಎಷ್ಟೋ ಇಷ್ಟಕರವಾದ ವಾಕ್ಯಭಾಗಗಳು. ಒಂದು ಕೈಯಲ್ಲಿ, ಈ ಮಾಹಿತಿಯನ್ನು ಅತೀ ಸುಲಭವಾಗಿ ಮಾಡಿದ್ದೇವೆ, ಆದರೆ ಯೇಸುವಿನ ಸಾಮ್ಯಗಳ ವಿಷಯವಾಗಿ ನೋಡುವದಾದರೆ, ಅದರ ಸಂದೇಶಗಳಲ್ಲಿರುವದು ಅಷ್ಟು ಸುಲಭವಲ್ಲ. ಯೇಸು ದೇವರು ಸಮೂಹಗಳೊಂದಿಗೆ ಅನೇಕ ಒಗಟುಗಳಿಂದ ಬೋಧಿಸುವದನ್ನು ಆರಿಸಿಕೊಂಡಿದ್ದರು ಮತ್ತು ಆತನ ಬೋಧನೆಗಳನ್ನು ಜನರೇ ಅರ್ಥ ವಿವರಣೆ ಮಾಡಿಕೊಳ್ಳಬೇಕಾಗಿತ್ತು, ಆದರೆ ತನ್ನ ಶಿಷ್ಯರಿಗೆ ಆ ಪಾಠಗಳನ್ನೆಲ್ಲಾ ವಿವರಿಸುತ್ತಿದ್ದರು.
ಉಪಾಧ್ಯಾಯರಾಗಿ ನಿಮ್ಮ ಕರ್ತವ್ಯವೇನಂದರೆ ವಿದ್ಯಾರ್ಥಿಗಳ ಊಹೆಗಳನ್ನು ಹಾರುವಂತೆ ಮಾಡುವದು, ಅವರು ಪರಿಶೋಧಕರಾಗಿದ್ದಂಥೆ ಅವರನ್ನವರೇ ಊಹಿಸಿಕೊಳ್ಳುವಂಥೆ ಮಾಡುವದು. ಈ 13 ವಾರಗಳಲ್ಲಿ ನಾವು ಅಧ್ಯಯನ ಮಾಡುವಂಥ ಈ ಸಾಮ್ಯಗಳ ಪ್ರತಿಯೊಂದರಲ್ಲಿ ಯೇಸುವಿನ ಅರ್ಥವೇನೆನ್ನುವದನ್ನು ಅತೀ ಶೀಘ್ರದಲ್ಲಿಯೇ ಅವರು ಕಂಡುಕೊಳ್ಳುವರು. ವಿದ್ಯಾರ್ಥಿಗಳನ್ನು ಅವರಷ್ಟಕ್ಕೆ ಅವರೇ ಪರಿಶೋಧಿಸುವದಕ್ಕೆ ನೀವು ಎಷ್ಟು ಹೆಚ್ಚಾಗಿ ಅನುಮತಿಸುತ್ತೀರೋ ಅಷ್ಟೇ ಹೆಚ್ಚಾಗಿ ಪ್ರತಿಯೊಂದು ಪಾಠವನ್ನು ಅವರು ಚೆನ್ನಾಗಿ ಕಲಿತುಕೊಳ್ಳುವರು. ಈ ಮಾಹಿತಿಯ ರಹಸ್ಯ ಸಂದೇಶವನ್ನು ಅವರು ಅತೀ ಶೀಘ್ರವಾಗಿ ಅರ್ಥ ಮಾಡಿಕೊಳ್ಳುವರು; ಅದೇ ದೇವರ ರಾಜ್ಯವನ್ನು ಕಂಡುಕೊಳ್ಳುವರು…
"ನಿಮ್ಮ ಹೃದಯಗಳಲ್ಲಿ".