Warning: include_once(../analyticstracking.php): failed to open stream: No such file or directory in /hermes/bosnacweb09/bosnacweb09ay/b2512/ipw.pro-vism/public_html/InternationalWebsite/kannada/chor-police/theme-header.php on line 69

Warning: include_once(): Failed opening '../analyticstracking.php' for inclusion (include_path='.:/usr/share/php') in /hermes/bosnacweb09/bosnacweb09ay/b2512/ipw.pro-vism/public_html/InternationalWebsite/kannada/chor-police/theme-header.php on line 69
 

ಕಳ್ಳ ಪೋಲೀಸ್ ವಿಬಿಎಸ್

ನೀವು ನಿಮ್ಮ ಪ್ರಮುಖ ಇನ್ಸಪೆಕ್ಟರ್ ಟೋಪಿ ಮತ್ತು ಓಡುವ ಬೂಟುಗಳನ್ನು ಧರಿಸಿಕೊಂಡು ಹಿಂದಟ್ಟುವ ಕಾರ್ಯಕ್ಕೆ ಸಿದ್ಧರಾಗಿದ್ದೀರೋ? ನಿಮ್ಮ ಊಹೆ ಸರಿಯಾಗಿದೆ! ನಿಮ್ಮ ಸಭೆಯನ್ನು ಅರಮನೆಯ ಧ್ಯೇಯದ ಚಿತ್ರಗಳೊಂದಿಗೆ ಅಲಂಕಾರ ಮಾಡುವ, ಪ್ರಮುಖ ಇನ್ಸಪೆಕ್ಟರ್ ಬ್ಯಾಡ್ಜ್ ಮತ್ತು ನಕ್ಷತ್ರಗಳನ್ನು ಗೋಡೆಗಳಿಗೆ ಅಂಟಿಸುವ, ಮತ್ತು ಹಿಂದಟ್ಟುವ ಸಂಗೀತದೊಂದಿಗೆ ಸ್ಪೀಕರ್ ಗಳನ್ನು ಹಾಕುವ ಸಮಯ ಇದಾಗಿದೆ. ರಜಾದಿನದ ಈ ಸತ್ಯವೇದ ಶಾಲೆಯು ಸೌವಾರ್ತಿಕ ಕೇಂದ್ರಬಿಂದುವನ್ನು ಹೊಂದಿದೆ. ನಿಮ್ಮ ವಿದ್ಯಾರ್ಥಿಗಳು ಮನೆಯಲ್ಲಿ ಮಾಡಿದ ಜೇಡಿಮಣ್ಣಿನಿಂದ (ಕ್ಲೇ) ಆಕರ್ಷಕ ರೀತಿಯಲ್ಲಿ ಯೇಸು ಕ್ರಿಸ್ತನ ಜೀವನದ ಕಥೆಗಳನ್ನು ಪ್ರತಿದಿನ ಕಲಿತುಕೊಳ್ಳುತ್ತಾರೆ. ವಾರದ ದಿನಗಳಲ್ಲಿ ರೋಮಾಪುರದ ಪುಸ್ತಕದಿಂದ (ಕೆಲವು ದೇಶಗಳಲ್ಲಿ ಮತ್ತು ಸಂಸ್ಥೆಗಳಲ್ಲಿ “ರೋಮನ್ಸ್ ರೋಡ್” ಎಂದು ಕರೆಯುತ್ತಾರೆ) ರಕ್ಷಣೆಗೆ ಅವಶ್ಯಕವಾಗಿರುವ ಐದು ಪ್ರಮುಖವಾದ ವಚನಗಳ ಮೂಲಕ ದೇವರ ಯೋಜನೆಯನ್ನು ಅವರು ಕಲಿತುಕೊಳ್ಳುತ್ತಾರೆ. ದೇವರು ಎಲ್ಲರನ್ನು ನೋಡುತ್ತಾನೆ ಮತ್ತು ಜನರು ಯೋಚಿಸುವ, ಹೇಳುವ ಮತ್ತು ಮಾಡುವ ಕೆಟ್ಟ ಕಾರ್ಯಗಳನ್ನು ತಿಳಿದುಕೊಳ್ಳುತ್ತಾನೆ ಎಂಬದನ್ನು ವಿದ್ಯಾರ್ಥಿಗಳು ಕಲಿತುಕೊಳ್ಳುತ್ತಾರೆ. ಪಾಪವು ಜನರನ್ನು ದೇವರಿಂದ ಬೇರ್ಪಡಿಸುತ್ತದೆ ಮತ್ತು ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ. ಜನರು ಮಾಡುವ ಎಲ್ಲಾ ಕೆಟ್ಟ ಕಾರ್ಯಗಳಿಗೆ ಯೇಸು ಕ್ರಿಸ್ತನು ಶಿಕ್ಷೆಯನ್ನು ಅನುಭವಿಸುವ ಆಯ್ಕೆಯನ್ನು ಮಾಡಿಕೊಂಡನು. ಆತನ ಮುಗಿದಿರುವ ಯಜ್ಞವು ಆಯ್ಕೆಯಾಗಿದೆ ಮತ್ತು ಅದನ್ನು ತೆಗೆದುಕೊಳ್ಳುವ ಅಥವಾ ಬಿಟ್ಟುಬಿಡುವ ಆಯ್ಕೆ ಜನರದ್ದಾಗಿದೆ. ತಮ್ಮನ್ನು ಕ್ಷಮಿಸುವಂತೆ ಯೇಸು ಕ್ರಿಸ್ತನನ್ನು ಬೇಡಿಕೊಳ್ಳಲು ಮತ್ತು ತಮಗಾಗಬೇಕಿದ್ದ ಶಿಕ್ಷೆಯನ್ನು ಆತನು ಅನುಭವಿಸಿದ್ದಕ್ಕೆ ಆತನಿಗೆ ಕೃತಜ್ಞತೆಯನ್ನು ಸಲ್ಲಿಸಲು ಮತ್ತು ತಮ್ಮ ಜೀವನದ ಉಳಿದ ದಿನಗಳು ಆತನನ್ನು ಹಿಂಬಾಲಿಸುವ ಪ್ರಮಾಣ ಮಾಡಲು ನೀವು ಮಕ್ಕಳನ್ನು ಮುನ್ನಡೆಸಬಹುದು.

ಡೌನ್ಲೋಡ್